ಮಾತು
ರಚನೆ : ಸಂಧ್ಯಾ ಐ
----------------------------------
ಬೆಂಕಿ ಭುಸುಗುಡುವಾಗ ಬೂದಿಯಾಗುವಂತೆ ಮಿತಿ ಮೀರಿ ಭೋರ್ಗರೆವ ನದಿಯ ನೆರೆಯಂತೆ ಸುಳಿ ತಿರುಗಿ ನಶಿಸುವ ಬಿರುಗಾಳಿಯಂತೆ ಕತ್ತಲು ಕವಿದಾಗ ಕಾಣದ ದಾರಿಯಂತೆ ಭೂಕಂಪದಲಿ ಶಿಥಿಲವಾದ ನಾಡಿನಂತೆ ಇರದೆ... ಇರಲಿ ಬೆಳಕು ಚೆಲ್ಲುವ ದೀಪದಂತೆ ಮಿತವಾಗಿ ಹರಿಯಲಿ ನೀರಿನಂತೆ ಸಮಸ್ಯೆಗೆ ಉತ್ತರವಾಗಿ ತಂಗಾಳಿಯಂತೆ ಸ್ಪಷ್ಟ ಸೂಕ್ಷ್ಮವಾಗಿ ನೀಲಾಕಾಶದಂತೆ ತರ್ಕ ಧೃಡ ಶಾಂತವಾಗಿ ಭೂಮಿಯಂತೆ
----------------------------------
ನೋಂದಣಿ ಐಡಿ : KPF-S1-5516