ವ್ಯರ್ಥವೇ ವ್ಯರ್ಥ, ಸಮಸ್ತವು ವ್ಯರ್ಥ.
ರಚನೆ : ದುರ್ಗಮ್ಮ
----------------------------------
ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ! ಮನುಷ್ಯನು ಪಡುವ ಪ್ರಯಾಸವೆಲ್ಲ ವ್ಯರ್ಥ. ಒಂದು ತಲಾಂತರವು ಗತಿಸುವುದು, ಇನ್ನೊಂದು ತಲಾಂತರವು ಬರುವುದು, ಸೂರ್ಯನೇರುವನು, ಸೂರ್ಯನಿಳಿಯುವನು, ಗಾಳಿಯು ತೆಂಕಣಕ್ಕೆ ಬೀಸಿ ಬಡಗಣಕ್ಕೆ ತಿರುಗುವುದು, ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು, ಆದರೂ ಸಮುದ್ರ ತುಂಬದು, ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರುಗಿ ಹೋಗುವವು,ಕಣ್ಣು ನೋಡಿನೋಡಿ ತೃಪ್ತಿಗೊಳ್ಳದು, ಕಿವಿ ಕೇಳಿಕೇಳಿ ದಣಿಯದು, ಇದ್ದದ್ದೇ ಇರುವದು, ನಡೆದದ್ದೇ ನಡೆಯುವದು. ಮನುಷ್ಯನು ನೀರಿನ ಮೇಲಿನ ಗುಳ್ಳೆಯ ಹಾಗೆ ಪ್ರೀತಿ ನೀತಿ ನಂಬಿಕೆಯಿಂದ ಓಟ ಸಾಗಿಸುವ
----------------------------------
ನೋಂದಣಿ ಐಡಿ : KPF-S1-5523