Submission 529

ಅವಳು

ರಚನೆ : ಚೈತನ್ಯ ರಾಮಚಂದ್ರ

----------------------------------

ಅವಳು! ನಿದ್ದೆಯ ಮಂಪರಿನಲ್ಲೂ ಕಣ್ಣ ರೆಪ್ಪೆಗೆ ಹಾರಲು ಕಲಿಸಿದವಳು, ಬಲವೇ ಇಲ್ಲದ ಕಾಲಿಗೆ ಭಾರವಾದ ಗೆಜ್ಜೆ ತೊಟ್ಟವಳು, ಭಾವಗಳೆಲ್ಲವನ್ನು ತುರುಬಿನಲ್ಲಿ ಕಟ್ಟಿ ಸಾಗಿದವಳು, ಅಂತರಾಳದ ನೋವನ್ನು ತಲೆ ದಿಂಬಲ್ಲೆ ಮರೆತು ನಲಿದವಳು, ಚಿಕ್ಕ ಚಿಕ್ಕ ಖುಷಿಯಲ್ಲಿ ಬದುಕ ಕಳೆದವಳು, ವಿಶಿಷ್ಟ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಿನಂತೆ ಜೀವಿಸಿದವಳು, ಕಂಡವರಿಗೆ ಕಂಡಂತೆ ಕಾಣದವರಿಗೆ ಕಲ್ಪನೆಯಂತೆ ಭ್ರಮೆಯಾದವಳು, ತನ್ನೊಳಗಿನ ಮೌನಕ್ಕೆ ಸ್ವರವಾದಗಳು, ಎಲ್ಲರಲ್ಲೂ ಇರುವಂತೆ ಕಂಡರು ಏಕಾಂಗಿಯಾಗಿ ಉಳಿದವಳು, ತನ್ನ ಕಥೆಗೆ ತಾನೇ ರೂಪಿಸಿಕೊಂಡ ನಾಯಕಿಯಂತೆ ಬದುಕಿದವಳು... ಅವಳೇ ನಮ್ಮೊಳಗಿರುವವಳು!!

----------------------------------

ನೋಂದಣಿ ಐಡಿ : KPF-S1-5100

0
Votes
135
Views
1 Year
Since posted

Finished since 398 days, 1 hours and 8 minutes.

Scroll to Top