ಹೆಣ್ಣಿನ ನೈಸರ್ಗಿಕ ಸೌಂದರ್ಯ
ರಚನೆ : ಅಮರೇಶ
----------------------------------
ನಿನ್ನ ಹರಿಣಾಕ್ಷಿ ಸಾಗರದಲ್ಲಿ ಮುಳುಗಿ ಕಾಮನಬಿಲ್ಲಾಗಿರುವ ಹುಬ್ಬಿನ ದಿಬ್ಬಲ್ಲಿ ಉದಯಿಸುವ ದಿವಾಕರನಾಗುವೆ !! ಸೇಬಿನಂತ ಕೆನ್ನೆಯ ಮೇಲೆ ಗುಲಾಬಿ ರಂಗಿನ ಮೊಡವೆಯಾಗಿ; ಬಳಿಕ ದೃಷ್ಟಿಯಾಗದ ಕಲೆಯಾಗುವೆ !! ಕಾಡಿಸಿ, ಪೀಡಿಸಿ, ಚಾಡಿಸಿ ನಗಿಸುವ ಪ್ರಯತ್ನದಲ್ಲಿ ಮೊಳಗುವ ನಿನ್ನ ಮುಗುಳುನಗೆಯಾಗುವೆ !! ಉಗುರು ರಂಗಿನ ಸ್ಪರ್ಶದಾಸೆಯಿಂದ ಹಿಂಸೆ ಕೊಡುವ ನಿನ್ನ ಮುಂಗುರುಳು ನಾನಾಗುವೆ !! ಹುಂ, ಅಂದು ನೋಡು ಸಹಸ್ರ ಜನ್ಮಕೂ ನಿನ್ನ ಅಂದ ಹೊಗಳುವ ಚಿರಂಜೀವಿ ಕವಿಯಾಗುವೆ..!
----------------------------------
ನೋಂದಣಿ ಐಡಿ : KPF-S1-5483