ಒಂದೊಮ್ಮೆ ಮನವೇ
ರಚನೆ : ಭಾರ್ಗವಿ ಜಿ ಆರ್
----------------------------------
ಒಂದೊಮ್ಮೆ ಮನವೇ ನಿನ್ನಲ್ಲಾಗುವುದೆಂದು ಮುನ್ನುಗಿಬಿಡು ಕಷ್ಟ - ಸುಖದ ಮಧ್ಯೆ ನೀನೇನೆಂದು ಜಗಕ್ಕೆ ಪ್ರತಿಬಿಂಬಿಸಿ ಬಿಡು ಪುಟ್ಟ ಪ್ರಪಂಚವಿದು ದೊಡ್ಡದೊಂದು ಕೀರ್ತಿಗಳಿಸಿಕೊಂಡು ಬಿಡು ಅವರಿವರ ಜರಿಯದೆ ಇರುವುದರಲ್ಲೇ ಕಾಲ ಹಾಕಿಬಿಡು ಬಗ್ಗಿಸುವವರ ಮುಂದೆಯೇ ಬಾಳು ಏನೆಂದು ಒಂದೊಮ್ಮೆ ತೋರಿಸೇಬಿಡು ಮತ್ತೊಬ್ಬರ ಬಾಯಿಗೆ ಮಾತಾಗದೆ ಮನವೇ ಒಂದೊಮ್ಮೆ ಪ್ರಯತ್ನಿಸಿ ಜನಮಾತಾಗಿಬಿಡು ಅಳಿದು ಹೋಗುವ ಜೀವವಿದು ಮನವೇ ಒಂದೊಮ್ಮೆ ಆಸರೆ ಆಗಿ ಬದುಕಲು ಪ್ರಯತ್ನಿಸಿ ಬಿಡು
----------------------------------
ನೋಂದಣಿ ಐಡಿ : KPF-S1-5501