ಚೊಚ್ಚಲು
ರಚನೆ : ಬಿ.ಎಮ್. ಕಟ್ಟಿಮನಿ
----------------------------------
ಧ್ವನಿ ಇಲ್ಲದ ಕಾವ್ಯ ಅರ್ಥವಿಲ್ಲದ ನುಡಿ ಪ್ರಾಸವಿಲ್ಲದ ಕವನ ವಿನಯವಿಲ್ಲದ ವಿದ್ಯೆ ತೃಣಕ್ಕೆ ಸಮ ಎಲ್ಲರೊಳಗೊಂದಾಗಿ ಎಲ್ಲದಕ್ಕೂ ಸ್ಥಿರವಾಗಿ ನಿಲ್ಲು ನೀನಾಗಿ ನಿನ್ನ ತನು ನಿನ್ನ ಮನ ಧನ ಮಾನ ಬಚ್ಚಿಕೋ ನೀ ನಿನಗಾಗಿ ನಿನ್ನ ಸದಾ ಇರುವೆ ನಾ ನಿನಗಾಗಿ ಚಾಲುಕ್ಯರ ಚಾತುರ್ಯತನ ಹಕ್ಕ ಬುಕ್ಕರ ಸಿರಿತನ ಕದಂಬರ ಕನ್ನಡತನ ನಮ್ಮಿಬ್ಬರ ಈ ಪ್ರೀತಿ ಬಡತನ ಸೇರಿ ಒಂದಾಗಲಿ ಆಮಂತ್ರಣ
----------------------------------
ನೋಂದಣಿ ಐಡಿ : KPF-S1-5502