ಬಾಳೊಂದು ಬೀಳಂತೆ
ರಚನೆ : ಧೀರಜ್
----------------------------------
ಬಾಳೊಂದು ಬೀಳಂತೆ, ಆಧಾರವೆ ಸೂತ್ರ! ಚಪ್ಪರದಿ ಪಸರುವುದು, ಕೋಲಿಟ್ಟರೆ ಮುಗಿಲ್ಮುಟ್ಟುವುದು ಸಾಗುವುದು ಬಾಳ್ವೆ ಸೇರಿದವರೊಂದಿಗೆ ಹರಿವ ನೀರದು, ಬಿದ್ದರೆ ಜಲಪಾತ-ನಿತ್ತರೆ ಕೊಳ, ಅದಕೆಲ್ಲಿದೆ ಅಸ್ತಿತ್ವ; ಮನುವಿನ ತನುವಿನಂತೆ ಸ್ಮೃತಿಯೆ ಆಕಾರ! ಮುಗಿಲ ಹನಿಯಂತೆ ಬಾಳು; ಇಳೆಯೊಳಿಂಗಿದರೆ - ಬಳಲ್ಚಿದರೆ ಸಿಹಿ! ಹೊರತು, ನದಿ ಸೇರಿ ನುಲಿದೊಡೆಯಲ್ಲ! ಬೆವರಿಳಿದರೆ ಬಾಳು. ಬಾಳಿಗಿಲ್ಲ ಆಕಾರ, ಜೀವಕಿಲ್ಲ ಆಕಾರ, ಬಾಳಿಗೆ ಬಂಧನವೆ ಆಕಾರ, ಬಳಲುವುದೆ ಝೇಂಕಾರ! ಮನುವಿಗೆ ಸ್ಮೃತಿಯೆ ಆಕಾರ, ನಡತೆಯೆ ಝೇಂಕಾರ!
----------------------------------
ನೋಂದಣಿ ಐಡಿ : KPF-S1-5511