ಮಗುವ ಮನ
ರಚನೆ : ದಿವಾಕರ್ ದುರ್ಗ
----------------------------------
ಮಗುವಾಗು ಮನದೊಳಗೆ ಮರೆತು ಅವರಿವರ ಸಾವಿರ ಚಿಂತೆ ಕಿವುಡಾಗು ಕಾಂಚಾಣದ ಸ್ವರಕೆ ನಿನ್ನ ಹೋಲಿಸದಿರು ಅವರಿವರಂತೆ ಬದುಕಿಗೆ ಶ್ರಮವೇ ಮುನ್ನುಡಿಯಂತೆ ಜೀವಿಸು ನಿಷ್ಕಲ್ಮಶ ಮಗುವ ಮನದಂತೆ ಆಗಸಕೆ ಎರಿದರು ಮರೆಯದಿರು ಸರಳತೆ ಅಳಿಯಲಿ ಸ್ವಾರ್ಥ ಉಳಿಯಲಿ ಮುಗ್ಧತೆ ಮನಬಿಚ್ಚಿ ನಗು ಮಗುವಂತೆ ಕಷ್ಟಗಳೆ ಹೆದರಿ ದೂರಾಗುವಂತೆ ಭರವಸೆಯ ಬೆಳಕು ಮೂಡುವಂತೆ ಮಗುವಾಗು ಮನದೊಳಗೆ ಮರೆತು ಅವರಿವರ ಸಾವಿರ ಚಿಂತಿಯೇ ಚಿತೆ ಎರಿಸದಂತೆ
----------------------------------
ನೋಂದಣಿ ಐಡಿ : KPF-S1-5513