ಕತ್ತಲೆಯ ಸ್ವರ್ಗ
ರಚನೆ : ಸುಧಾಕರ ಎಂ
----------------------------------
ಊರು ನನ್ನೂರು ಇದು ಮಡೆನೂರು ಅಜ್ಜ ಮುತ್ತಜ್ಜರರು ಬಾಳಿದ ತವರು ಅಳಿದು ಉಳಿದವರ ನೆನಪಿನ ಸೂರು ಆಧುನಿಕತೆಯ ಬೆಳಕಿನ ತೆವಲಿಗೆ ಬಿದ್ದವರು ನಾವು ಬೆಂಕಿಯಿಂದ ಬಾಣಲೆಗೆ ಮುಳುಗಿದರು ಮತ್ತೆ ಮಿನುಗುವ ಕಿರುನಗೆ. ಲೋಕಕೆ ಬೆಳಕು ಕೊಟ್ಟವರು ನಾವು ಆದರೂ ಚಿಮಣಿ ಬುಡ್ಡಿ ಹಚ್ಚೋದು ಬಿಡೆವು ಉಕ್ಕಿ ಬಸಿಯುತ್ತಿದೆ ನೆಲದ ನೆನಪ ಕಾವು ಆದರೂ... ನೆಡೆಸೋಣ ಒಮ್ಮೆ ನಮ್ಮೂರ ಬೆಳಕ ಕರಗ ಒಂದಾಗಬೇಕಿದೆ ಉಗ್ರ ಹೋರಾಟಕ್ಕೆ ನಾವೀಗ ನನ್ನೂರ ಬದುಕು ನನಗೆ ಕತ್ತಲೆಯ ಸ್ವರ್ಗ..
----------------------------------
ನೋಂದಣಿ ಐಡಿ : KPF-S1-5517