ಕಲ್ಪನೆಯ ಕಡಲು
ರಚನೆ : ಕವಿತಾ ನಾಗೇಂದ್ರ ಗಾಂವ್ಕರ್
----------------------------------
ನಾನೊಂದೆಡೆಗೆ ಸಾಗಬೇಕು,ಸಾಗುತ್ತಾ ದೂರ ಹೋಗಬೇಕು. ನನಗಾಗಿ ಹೋಗಬೇಕು,ಹೋಗುತ್ತಾ ನಾನು-ನಾನಗಬೇಕು.. ನಿರ್ಜನ ಪ್ರದೇಶದತ್ತ,ನಿರ್ಮಲ ತಂಗಾಳಿಯಲ್ಲಿ, ನನ್ನಲ್ಲಿ ಇಣುಕಿ ನನ್ನಂತರಾತ್ಮವನ್ನೊಮ್ಮೆ ಅರಿಯಬೇಕು.. ಹಾಗೊಂದು ಕಲ್ಪನೆಯ ಲೋಕಕ್ಕೆ ಕಾಲಿಡಬೇಕು, ಸುತ್ತಲೂ ಕತ್ತಲೆಯ ಪರದೆಯೇ ಕಾವಲಾಗಿರಬೇಕು.. ಹಾಗೆಯೇ,ನಿಂತ ಜಾಗದಿ,ನಿಶ್ಯಬ್ಧ ತಂಗಾಳಿಯಲ್ಲಿ ಕೂತು, ಇಹಲೋಕವ ಮರೆತು ಹೊಸಲೋಕವ ಕಾಣಬೇಕು.. ಅಂತಹ ನೆಮ್ಮದಿಯ ಕ್ಷಣವನೊಮ್ಮೆ ಪಡೆಯಬೇಕು, ಮಾಡಿದ ತಪ್ಪಿಗಾಗಿ ನನ್ನೊಳು ಕ್ಷಮೆಯಾಚಿಸಬೇಕು, ಪಡೆದ ಬದುಕಿಗೆ ನನ್ನೊಮ್ಮೆ ತಬ್ಬಿ ಅಭಿನಂದಸುತ್ತಾ, ಕಾಲನೊಳು ಕೃತಜ್ಞಿಸಿ ಒಮ್ಮೆಯೇ ಮರೆಯಾಗಬೇಕು..
----------------------------------
ನೋಂದಣಿ ಐಡಿ : KPF-S1-5519