ಜಲ ಸಂರಕ್ಷಣೆ ನಮ್ಮ ಹೊಣೆ
ರಚನೆ : ನಾಗೇಶ ಮ. ಗೋಲಶೆಟ್ಟಿ (ಸಾಹಿತ್ಯಪ್ರಿಯ)
----------------------------------
ಕೇಳಿರೆಲ್ಲ ನಾಡ ಜನತೆ ಜಲವೇ ಸಕಲ ಜೀವದ ಮೂಲ ಬರಬಹುದೊಮ್ಮೆ ಎಚ್ಚರ ಇರಲಿ ನೀರಿಗಾಗಿ ಪರದಾಡುವ ಕಾಲ. ಮೋಡದಿಂದ ಸುರಿವ ಮಳೆಯ ಜಾಣ್ಮೆಯಿಂದ ಸಂಗ್ರಹಿಸಬೇಕು ಹರಿದು ಹೋಗುವ ನೀರನ್ನೆಲ್ಲ ತಡೆದು ನಾವು ನಿಲ್ಲಿಸಬೇಕು. ಮಳೆ ಬಾರದೆ, ಬೆಳೆ ಇಲ್ಲದೆ ಜನರು ಗುಳೆ ಹೋಗುವರು ಹೊಟ್ಟೆಗಾಗಿ ಬಟ್ಟೆಗಾಗಿ ದುಡಿದು ಜೀವ ಸವೆಸುವರು ಮಳೆಗಾಗಿ ಮರ ಬೆಳೆಸೋಣ ಜಲ ಸಂರಕ್ಷಣೆ ನಮ್ಮ ಹೊಣೆ ಎಲ್ಲರೂ ಸಂಕಲ್ಪ ಮಾಡೋಣ.
----------------------------------
ನೋಂದಣಿ ಐಡಿ : KPF-S1-5522