ಅವಳು ಬೆಳಕಿನ ಹೆಜ್ಜೆ...
ರಚನೆ : ಸ್ಮೀತಾ ಹಸುರೆ
----------------------------------
ಅವಳು ಗಾಳಿ, ಅವಳು ಹನಿ, ಕನಸಿನ ಬೀಜದ ಬೆಳಕಿನ ಮಣಿ. ನಿಂತಡೆ ಸುಗ್ಗಿ, ನಡೆಯುದೇ ಹಾಡು, ಸಾಧನೆಗೋಸ್ಕರ ಬದ್ಧತಾ ವಾದು. ಗಾಳಿ ಎಸೆಯಲಿ, ದುಃಖ ಬೆಸೆಯಲಿ, ಅವಳ ನಗು ಮಾತ್ರ ನೀರಸಗಾದೀತಾ? ಕಡಲು ಅಲೆಗೂಡಲಿ, ಆಕಾಶ ಮುಗಿದುಬಿಡಲಿ, ಅವಳ ಕನಸು ಎಂದಿಗೂ ಮಂಕಾಗೀತಾ? ಬಿದ್ದರೂ ಏಳೋ ಧೈರ್ಯದ ರೂಪಾ, ಸೋತರೂ ಗೆಲ್ಲೋ ಹೊತ್ತಿಗೆಯ ದೀಪಾ. ಮುಗಿಯದ ಕನಸು, ನಿಲ್ಲದ ಹಾದಿ, ಅವಳ ಹೆಜ್ಜೆ – ಜಗಕೆ ಓದಿ!...
----------------------------------
ನೋಂದಣಿ ಐಡಿ : KPF-S1-5526