ಕಲಿಯುಗದ ದ್ರೌಪದಿ
ರಚನೆ : ಕವಿತಾ ಚವಲಿ
----------------------------------
ನೇತ್ರಾವತಿಯ ನದಿಯ ಪಕ್ಕದಲ್ಲಿ ವಾಸಿಸುವ ಧ್ರುಪದ ರಾಜನ ರಾಜಕುಮಾರಿ ದ್ರೌಪದಿ ನಾನು. ಕಾಮಪಿಶಾಚಿ ಧುರ್ಯೋಧನನ ಕೈಗೆ ಸಿಕ್ಕಿ ಕ್ರೂರವಾಗಿ ಕೊಲೆಯಾದ ದ್ರೌಪದಿ ನಾನು. ಅಂಧ ಧೃತರಾಷ್ಟ್ರನ ಪುತ್ರ ಮೋಹದಿಂದ ನ್ಯಾಯ ಸಿಗದೆ ಮಣ್ಣಾದ ಕಲಿಯುಗದ ದ್ರೌಪದಿ ನಾನು. ಧರ್ಮ ಗೊತ್ತಿದ್ದರು ಭಯ,ಅಧಿಕಾರ ಹಾಗೂ ಹಣದ ಮೋಹಕ್ಕೆ ಅಧರ್ಮಿಯಾದ ಸಭಿಕರು! ಕಲಿಯುಗದ ಧರ್ಮದ ಯುದ್ಧಕ್ಕೆ ಇನ್ನೂ ಹದಿನೆಂಟು ವರ್ಷ ಬೇಕೆ? ಈ ಕಲಿಯುಗದ ದ್ರೌಪದಿಗೆ ಮತ್ತೆ ಕೃಷ್ಣ ಅವತರಿಸಬೇಕೆ?
----------------------------------
ನೋಂದಣಿ ಐಡಿ : KPF-S1-5536