ನೆನ್ನೆ ಇಂದು ನಾಳೆಗಳ ನಡುವೆ .
ರಚನೆ : ಕಾವ್ಯ ಎನ್ ಕೆ
----------------------------------
ನೆನ್ನೆ ಎಲ್ಲಿದ್ದೆವೊ ನೆನಪಿಲ್ಲಾ ನಾಳೆ ಎಲ್ಲಿರುತ್ತೆವೊ ಗೊತ್ತಿಲ್ಲ .. ಮರೆಯಲೆತ್ನಿಸಿದಷ್ಟು ಮತ್ತೆ ಮತ್ತೆ ಮನದಲ್ಲಿ ಮರುಕಳಿಸುತ್ತಿಹ ನೆನ್ನೆಗಳು .. ಕಂಡಕನಸುಗಳ ಕ್ಷಣದಲ್ಲೆ ಕೊಂದು ಕೊನೆಯಾಗಿಸಿದಂತಹ ದಿನಗಳು .. ನೆನ್ನೆ ಕಳೆದಿತೆಂದಿಂದು ಕೈಕಟ್ಟಿ ಕೂರಲೆತ್ನಿಸಿದರೆ ನಾಳೆಯೆಂಬುದಿದೆಂಬ ಸೆಳೆತ ಕೈಹಿಡಿದು ಬಿಡುತ್ತಿಲ್ಲ .. ನೆನ್ನೆ ಜೊತೆಯಲ್ಲಿದ್ದವರನ್ನು ಇಂದು ಕಳೆದುಕೊಂಡು ನಾಳೆ ಮತ್ತೆ ಹುಡುಕುವ ಜಂಜಾಟದಲ್ಲೆ ಜೀವನ ಮುಗಿಯುವುದೆನೊ.. ನಾಳೆಗಾಗಿ ನೆನ್ನೆಯ ಕಳೆದುಕೊಂಡು ಇಂದು ಈ ಕ್ಷಣ ಎಲ್ಲಿದ್ದಿವೊ ಅನ್ನುವುದಷ್ಟೇ ಸತ್ಯ...
----------------------------------
ನೋಂದಣಿ ಐಡಿ : KPF-S1-5537