ತವರಿನ ತಬ್ಬಲಿ
ರಚನೆ : ಕೌಶಿಕಾ ಬಿ.ಕೆ
----------------------------------
ಅರಮನೆಯ ಊರಿನಲ್ಲಿ ಅಸಮಾನತೆಯ ಕೇರಿಗಳು ನೆರಳಿನ ನೆಲದಲ್ಲೇ ನರಳಿದ ಜನಗಳು ಯುಗ ಯುಗಗಳ ಯುದ್ಧಗಳಿಗೆ ಜರ್ಜರಿತ ಭಾರತ ಕೆಂಪು ಕಪಿಗಳ ಸ್ವಾರ್ಥದ ಆಟ ಮೋಸದ ಆಟಕ್ಕೆ ನೊಂದವರೆಷ್ಟೋ ಬೆಂದವರೆಷ್ಟೋ ಕಂಡು ಕಾಣದೆ ಹೋದವರೆಷ್ಟೋ.. ಕೊಟ್ಟು ಕೆಟ್ಟರು ಕೊಡದೆ ಸತ್ತರು ತವರಿನ ತಬ್ಬಲಿಗಳು. ಅಲ್ಲೆಯಿರು, ಮುಟ್ಟದಿರು, ಒಳಬಾರದಿರು ಬಾವಿ ನೀರಿಗೆ ಧರ್ಮದ ರಾಟೆ ಚಾಟಿ ಏಟಲಿ ಜಾತಿ ಪೆಟ್ಟು ಇದು ನಮ್ಮ ನೆಲ ಅದು ನಿಮ್ಮ ಕುಲ. ಬಡ ಜನರ ಜಡ ಬದುಕಿಗೆ ಬೇಕಿದೆ ನೆಮ್ಮದಿಯ ನಾಳೆಗಳು
----------------------------------
ನೋಂದಣಿ ಐಡಿ : KPF-S1-5541