Submission 631

ಅವಳ ನೆನಪು

ರಚನೆ : ಪಂಪಾಪತಿ ಕೆ

----------------------------------

ಮತ್ತದೇ ಸಂಜೆ... ಬರ್ತದೆ ಹಾಂಗೇ ಮನಸಿಗೆ ನಿನ್ ನೆನ್ಪು ಬ್ಯಾಡಂದ್ರೂ ಕೇಳ್ದಂಗೆ!! ಗೊತ್ತದೇ ನಂಗೆ.... ಇರ್ತದೆ ಹ್ಯಾಂಗೆ.. ಕಣ್ಣಿಗೆ ನಿನ್ ಕನ್ಸು ಬ್ಯಾಡಂದ್ರೂ ಬೀಳ್ದಂಗೆ?? ಹಗಲಾಗೆಲ್ಲ ಮನ್ಸು... ಶಾಂತತೆಯ ಒಡಲು ಇರುಳಾಗ್ತಿದ್ದಂಗೇನೆ... ಹುಣ್ಮೆ ರಾತ್ರಿ ಕಡಲು! ಬೂದಿ ಮುಚ್ಚಿದ ಕೆಂಡಿದ್ದಂಗೆ... ಚೆಲ್ವಿ ನಿನ್ನ ನೆನ್ಪು ಸಂಜೆ ಗಾಳಿಗ್ ಬೂದಿ ಹಾರಿ... ಕಾವೇರೈತಿ ತಂಪು. ಕಾಯ್ಕೊಂಡು ಕೂತ್ಕೊಂಡಂಗೆ ಕರು... ತಾಯ ಹಸು ಆಗಮನಕ್ಕ... ನಾ ಕೂತಿವ್ನಿ ನಿನ್ನ ಕಾಯ್ಕೊಂಡು ಬರ್ಲಿಲ್ವಾ ನಾ ಗಮನಕ್ಕ...???

----------------------------------

ನೋಂದಣಿ ಐಡಿ : KPF-S1-5233

0
Votes
141
Views
1 Year
Since posted

Finished since 397 days, 20 hours and 25 minutes.

Scroll to Top