ಅಮ್ಮ
ರಚನೆ : ಶ್ರೀವಾಸ ಭಟ್ಟ
----------------------------------
ಮನದ ಮೊದಲ ಬರದ ಮಾತಿಗೆ ನಿನ್ನ ಧ್ವನಿಯ ಸ್ಪರ್ಶ ಸಾಲದೆ ನಗುವ ಮರೆತ ನನ್ನ ನೆನಪಿಗೆ ಅಳುವ ಮರೆಸಲು ನೀನೆ ಬರುವೆಯೇನಮ್ಮಾ... ನಡೆವ ನಾಳೆಗೆ ಹೆಜ್ಜೆಯಾಗಿಹೆ ಕಳೆದ ನಿನ್ನೆಗೆ ಕಾವಲಾಗಿಹೆ ನುಡಿಯೊ ಇಂದಿಗೆ ಧ್ವನಿಯು ನೀನಿರೆ ನಿನ್ನ ಕಾಲ ತೊಟ್ಟಿಲ ಮೀನು ನಾನಮ್ಮ..... ರಾತ್ರಿ ಬೆಳಕು ನಿನ್ನ ರಾಗವು ಮಳೆಯ ಬಿಸಿಲು ನಿನ್ನ ಕೋಪವು ಎಂದೋ ಮುಗಿದ ಸ್ವಂತ ಇಚ್ಛೆಯು ಮೌನವಾದ ನಿನ್ನ ಕತೆಯ ಸೊಗಸು ಏನಮ್ಮ!!!......
----------------------------------
ನೋಂದಣಿ ಐಡಿ : KPF-S1-5408