ಯಾತನೆ
ರಚನೆ : ಮಹಾಂತೇಶ
----------------------------------
ಅರಳಿದ ಹಾ,ಕಟ್ಟಿದ ಮಾಲೆಯು ಕಣ್ಣೀರ ಹಾಕಿಹವು ಸಿಡಿಮದ್ದುಗಳು ತನನ್ನು ತಾನು ಸುಟ್ಟುಕೊಂಡು ವಿಲ ವಿಲನೆ ಒಲವ ಕಳೆದುಕೊಂಡಿಹದು ನೀರು ತುಂಬಿದ ಮಡಿಕೆಯು ದಾಹದಿಂದ ಸಿಡಿದು ಒಡೆದು ಹೊಗಿಹುದು ಹಚ್ಚಿದ ಊದುಬತ್ತಿಯ ಹೊಗೆಯು ಆವರಿಸಿತು ಆತನ ಹೊತ್ತೊಯಲು ಬಿಡದೆ ತನ್ನ ಆಕ್ರಂದನ ವ್ಯಕ್ತವಡಿಸುತ್ತಿಹುದು ವಸುಧೆ ಯು ಜಲವ ಹರಿಸಿಹಳು ನೋವ ಬರಿಸದೆ ಕಂಬನಿಯ ಹಾಕಿಹಳು ಎದೆ ಎತ್ತರಕ್ಕೆ ಮಣ್ಣು ಮಲಗಿರಲು ಅದರ ನೋವ ತಿಳಿಸದೆ ಮೌನವಾಗಿಹದು ಹಚ್ಚಿದ ಹಣೆತೆ ಯೊಳಗಿನ ದೀಪವು ಬೆಳಕ ಬೆಳಗುತ್ತಿದ್ದರು ಆ ಮನೆಯು ಕಗ್ಗತ್ತಲು ಆವರಿಸುತ್ತಿಹುದು ಆಮನೆಯ ಕೈ ದೀವಿಗೆಯೆ ಆರಿ ಹೊಗೆಯಾಡುತ್ತಿಹದು.....
----------------------------------
ನೋಂದಣಿ ಐಡಿ : KPF-S1-5414