ಕನ್ನಡದ ಕಂದ ಭೂಮಿಗೆ ಬಂದ
ರಚನೆ : ಚೇತನ ಗುಡೆಣ್ಣವರ
----------------------------------
ಕನ್ನಡದ ಕಂದ ಬೆಳಕಿಗೆ ಬಂದ ಕರುನಾಡ ಕಂದ ನೀನೇ ನನ್ನ ಪ್ರೀತಿಯ ಕಂದ. ಕನ್ನಡ ನಾಡು ಅಂದ ಕನ್ನಡ ಭಾಷೆ ಚಂದ ನೀನೇ ನನ್ನ ಪ್ರೀತಿಯ ಕಂದ. ಅರಳಿದ ಹೂಗಳ ಬಣ್ಣವು ಚೆಂದ ಕೋಗಿಲೆಯನಾದ ಸ್ವರ ಚಂದ ನಿನ್ನ ಕೂಗೆ ನನಗೆ ಚೆಂದ ನನ್ನ ಪ್ರೀತಿಯ ಕಂದ. ಗಾಂಧಿ ತತ್ವ ಸಿದ್ಧಾಂತ ಚಂದ ಭಗತ್ ಸಿಂಗ್ ರಾಜಗುರು ಹೋರಾಟ ಚಂದ ಅಂಬೇಡ್ಕರ್ ಸಂವಿಧಾನ ಚಂದ ಆಗು ನೀ ಅವರಂತೆ ಕಂದ ನನ್ನ ಪ್ರೀತಿಯ ಕಂದ. ನೀನು ಚಂದ ನಿನ್ನ ನಗುವು ಚಂದ ನೀ ಎಂದರೆ ಇನ್ನೂ ಚಂದ ನನ್ನ ಪ್ರೀತಿಯ ಕಂದ..
----------------------------------
ನೋಂದಣಿ ಐಡಿ : KPF-S1-5416