ಜೈ ಭೀಮಾಯಣ
ರಚನೆ : ಮಲ್ಲಪ್ಪ. ಪ. ಮೀಸಿಯವರ
----------------------------------
ಮಂದಿರ-ಮಸೀದಿ ಬಿಕ್ಷುಕರ ಜನಕ ನಂಬಿದ್ದಿರಿ ನೀವು ಗ್ರಂಥಾಲಯವೇ ನಿಜ ನಾಕ ಜಾತಿ ವರ್ಗದ ಸಂಕೋಲೆ ತೊರೆದು, ತೋರಿದಿರಿ ನವ ಮಾರ್ಗಸೂಚಕ ನಿಮ್ಮ ಹೋರಾಟದ ಫಲದಿ, ಭಾರತವಿಂದು ಜಾತ್ಯಾತೀತತೆಗೆ ಆಗಿದೆ ಪ್ರತೀಕ ಯುವಜನಕ, ಬಾಬಾಸಾಹೇಬರ ತಿಲಕ, ಗುರಿ ತಲುಪುವ ತನಕ ನೋಡಬನ್ನಿ ಸಾಹೇಬರೇ, ನಿಮ್ಮ ಕನಸಿನ ಭಾರತವ ಮೂರ್ತಿಪೂಜೆ ಖಂಡಿಸಿದ ನಿಮ್ಮದೇ ಮೂರ್ತಿಗಳಂದವ ಬಿತ್ತಿದ ಕನಸಿಗೆ ಮಳೆಗಾಲದಲ್ಲೂ ಬೇಕೆ ಮೀಸಲಾತಿಯ ನೀರಾವರಿ..? ಇಲ್ಲಿ ವಿದ್ಯೆಗಿಂತ ಹೆಚ್ಚು ಹೋರಾಟವೇ ನಡೆದಿದೆ ತರಾವರಿ ಅನುಕೂಲ ಅತಿಯಾಗಿ, ಆಲಸ್ಯ ಅರಸಾಗಿ, ಜಾತಿ ಮಾತೆ ಭರ್ಜರಿ ಅಸ್ಪೃಶ್ಯತೆಯ ಕರಾಳ ಕುಲುಮೆಯಲ್ಲಿ ಕಾದ ಚೂಪು ಬಾಣ ಮಾತೆಂಬ ಬಿಲ್ಲ ಬೆನ್ನ ಏರಿ, ಮೌಡ್ಯದೆದೆಯಿರಿದ ನಾಗಪುರ ಭಾಷಣ ದಣಿವರಿಯದ ನಿಮ್ಮ ಕಾರ್ಯವಿಧಾನ, ದೊರಕಿದೆ ಭವ್ಯ ಭಾರತಕ್ಕಿಂದು ಶ್ರೇಷ್ಠ ಸಂವಿಧಾನ ಶಿಕ್ಷಣ,ಸಂಘಟನೆ, ಸಂಘರ್ಷಗಳೆಂಬ ತ್ರಿವಿಧ ಶಕ್ತಿ ತುಂಬಿದೆ ನೀವಿಟ್ಟ ಪ್ರತಿಪತಿ ಕಣ - ಕಣ ಮನೆ ಮನೆಗಳ ಜನಮನಗಳಲಿ ಜನಪದವಾಗಿದೆ ಜೈ ಭೀಮಾಯಣ ಜೈ ಭೀಮಾಯಣ
----------------------------------
ನೋಂದಣಿ ಐಡಿ : KPF-S1-5437