ಸಂಸಾರದ ಸಾರಥಿ
ರಚನೆ : ಡಾ. ರಮೇಶ. ಸಿ
----------------------------------
ನನ್ನವ್ವನ ಕೊಂಡಾಡಲು ಪದ ಪುಂಜ ಸಾಲದು ಅವಳು ಬಿಟ್ಟೋದ ನೆನಪುಗಳು ಧರೆಯಲೆಂದೂ ಮಾಸದು ಮನೆಗಾಗಿ ತೇದು ಮಲ್ಲಿಗೆಯಾದಳು ಹೊಲಕಾಗಿ ಸವೆದು ಬೆಳೆಯಾದಳು ಸಂಸಾರದ ಭಾರ ಹೊತ್ತು ಸಾರಥಿಯಾದಳು ಬದುಕಲ್ಲಿ ಎಣ್ಣೆ ಬೆಣ್ಣೆ ಕಾಣಲಿಲ್ಲ ನನ್ನವ್ವ ಯಾವತ್ತೂ ಸುಣ್ಣ ಬಣ್ದದ ಮಾತನಾಡಲಿಲ್ಲ ನನ್ನವ್ವ ಹಬ್ಬ ಹರಿದಿನಗಳಲ್ಲಿ ಉಗ್ಗಿಯಾದಳು ಸಾಯೋತನಕ ದುಡಿದು ಸುಗ್ಗಿಯಾದಳು ಮಕ್ಕಳ ಬಾಳಿಗೆ ದಾರಿದೀಪವಾದಳು
----------------------------------
ನೋಂದಣಿ ಐಡಿ : KPF-S1-5440