ಪ್ರೇಮೊತ್ಸವ
ರಚನೆ : ಅಣ್ಣಪ್ಪ ಜೆಡ್ಡಿನಮನೆ
----------------------------------
ನೀರಾ ಎಲೆಯಲ್ಲಿ ಮುಂಗುರುಳ ನಗು ತೇಲುತ್ತಿದೆ ಪಸರುಡೆಯ ಅಂಕೆಯಲ್ಲಿ ಅತ್ಮ ಲಿಂಗನ ನಿರ್ಭರಡತೆಯಲ್ಲಿ.. ಆಕಾಶದ ನೀಲಿಯ ಕೋಲ್ಮಿಂಚಿನ ರಾಗಕ್ಕೆ ನೀರಾ ತಡಿಯ ಮೋರೆತದ ಜೋಗುಳವು ಮೌನದ ತಡಿಯಲ್ಲಿ ಮನಬಿಚ್ಚಿ ಹಾಡುತ್ತಿದೆ ಗರಿಬಿಚ್ಚಿದ ಅಭ್ಧಿಪವನದಲ್ಲಿ.. ನೀಲ ಕಡಲ ತಾರೆಯಲ್ಲಿ ಮನಸುಗಳ ಅತ್ಮಚೇತನ ದಿವ್ಯಾ ಚೇತನವಾಗಿ ಮಿನುಗಿತ್ತಿದೆ ಶಿವ ತಾಂಡವನ ಹರ್ಷದ ಹೊನಲಿಗೆ ಗಿರಿ ಶಿಖರ ತೊಡೆಯಲ್ಲಿ ನುಸುಳಿದ ಗಂಗೆಯ ಪ್ರೇಮದ ಹರಿವಿಗೆ ಅಂತರಂಗದ ಸಾಲುಗಳು ಬಹಿರಂಗದ ಮುಗಿಲ ತಾರೆಗಳ ತೋಟದಲ್ಲಿ ಹಾಡುತ್ತಿದೆ ಪ್ರೇಮೋತ್ಸವದ ಗೀತೆ....
----------------------------------
ನೋಂದಣಿ ಐಡಿ : KPF-S1-5441