ಸಮಯ
ರಚನೆ : ರಂಜಿತಾ ಬಿ ಕೆ
----------------------------------
ಓಡುವ ಗಡಿಯಾರ ನಿನ್ನಲ್ಲಿದೆ ಪರಿಹಾರ ಜೀವನ ನಿನ್ನ ಲೆಕ್ಕಾಚಾರ ಅರಿತರೆ ನಿನ್ನ ಅದುವೇ ಚಮತ್ಕಾರ ಹೇಳುವರು ಎಲ್ಲ ಸಮಯವೇ ಎಲ್ಲಾ ಸರಿದೂಗಿಸಿ ನೆಡೆದರೆ ದೊರೆಯುವುದು ಎಲ್ಲಾ ಕಾಲದ ಮಹಿಮೆ ತಿಳಿಯುವುದೇ ಇಲ್ಲಾ ಚಲಿಸುವ ಮೋಡ ತಿರುಗುವ ಭೂಮಿ ಸೂರ್ಯನ ಕಿರಣ ಚಂದ್ರನ ಬಿಳಿಪು ನಿಂತಿರುವುದೇ ಈ ಸಮಯದ ಮೇಲೆ ಮೀರಿದವರು ಯಾರೂ ಇಲ್ಲಾ ಇದರ ಎಲ್ಲೆ ನಿಂತರೂ ನನ್ನ ಹೃದಯ ಬಡಿತ ನಿಲ್ಲದು ನಿನ್ನ ಓಡುವ ತುಡಿತ ಎಲ್ಲರಿಗೂ ಬರುವುದು ಒಂದು ಒಳ್ಳೆಯ ಸಮಯ ಆಗ ಆಗುವುದು ಜೀವನ ಸುಖಮಯ
----------------------------------
ನೋಂದಣಿ ಐಡಿ : KPF-S1-5443