ಕಾಲದ ಗೆಳತಿ
ರಚನೆ : ಮನೋಜ್ ಪಿ
----------------------------------
ಕಾಲದ ಪುಟಗಳ ಮೇಲೆ ನಿನ್ನ ಹೆಜ್ಜೆಯ ಗುರುತುಗಳು, ನೆನಪಿನ ದೋಣಿಯಲ್ಲಿ ನಿನ್ನದೇ ಮಾತುಗಳು ಕಷ್ಟದ ಕಡಲಲ್ಲಿ, ನೀನೊಂದು ದಡವು. ಬದಲಾಗುವ ಋತುಗಳಲ್ಲಿ, ಸ್ಥಿರವಾದ ನೆರಳು ನೀನು ಸಂತೋಷದ ಕ್ಷಣಗಳಲ್ಲಿ, ನನ್ನ ಪ್ರತಿಬಿಂಬ ನೀನು ನೋವಿನ ಕತ್ತಲಲ್ಲಿ, ಬೆಳಗುವ ದೀಪ ನೀನು, ಸೋತಾಗ ನೀಡುವ, ಧೈರ್ಯದ ರೂಪ ನೀನು ಕಾಲದ ಗೆಳತಿ ನೀನು,ಎಂದಿಗೂ ನನ್ನವಳು, ನನ್ನೆಲ್ಲಾ ಮರೆಯಲಾಗದ ನೆನಪುಗಳು. ನನ್ನರಸಿ,ನನ್ನಾಕೆ,ನನ್ನ ಪ್ರೀತಿಯ ಕಾಲದ ಗೆಳತಿ....
----------------------------------
ನೋಂದಣಿ ಐಡಿ : KPF-S1-5447