ಸಂಕ್ರಾಂತಿ
ರಚನೆ : ಮುಸ್ತಫಾ.ಭ.ಜಾಲಗಾರ
----------------------------------
ಸುಗ್ಗಿಯ ಸಂಭ್ರಮ ರೈತನ ಮೊಗದಲಿ ಹಬ್ಬದ ಸಂಭ್ರಮ ಜಗದಾ ಜನರಲಿ ವರುಷದ ಮೊದಲ ಹರುಷವ ತಂದಿತು ರೈತನ ಬಾಳಲಿ ಸಂಭ್ರಮ ನೀಡಿತು ಸೂರ್ಯನು ತನ್ನ ಪಥ ಬದಲಿಸಿದ ಕಾಡಿಗೂ ನಾಡಿಗೂ ಹರುಷವ ತಂದ ಪ್ರಕೃತಿಯು ಬದಲಾವಣೆಯ ನೀಡಿತು ನಮ್ಮೆಲ್ಲರ ಬಾಳಲಿ ಹೊಸ ಬೆಳಕು ಮೂಡಿತು ಎಳ್ಳುಬೆಲ್ಲವ ಕೂಡಿ ತಿನ್ನಲು ನೋವುನಲಿವುಗಳು ಜೊತೆಯಾಗಿರಲು ಬಂದೆ ಬಂದಿತು ಹರುಷದ ಹಬ್ಬವು ತಂದೆ ತಂದಿತು ಸಂಕ್ರಾಂತಿಯ ಸಂಭ್ರಮವು
----------------------------------
ನೋಂದಣಿ ಐಡಿ : KPF-S1-5455