ಬಿಟ್ಟಿರಲಾಗದ ಬಂದ
ರಚನೆ : ದಿವ್ಯಾ ಡಿ
----------------------------------
ನನ್ನೊಲವಿನ ಜೀವ ಹೇಗಿರುವೆ ನಾನಿರದೆ ನೀನೀಗ ನಿನ್ನೊಡನೆ ನಾನು ಕಲಿಯಲು ಬೆರೆತ ಸಮಯ ಮರೆಯಲಾಗದದು ಜೀವನ ಪೂರಾ ನಿನ್ನೊಂದಿಗೆ ನಾನು ಕಲಿತ ಪಾಠ ಕಣ್ಣಿಗೆ ಕಟ್ಟಿದಂತಿದೆ ನೋಡಿದ ಕಣ್ಣೋಟ ಅದೇಕೋ ಯಾರ ಶಾಪವೋ ನೀನೆ ನನ್ನ ದೂರತಳ್ಳಿದ ವಿಕೋಪವೋ ತಿಳಿಯದು ನನಗೆ ಸ್ವಲ್ಪನೋವಾದರೂ ಸಹಿಸದ ಜೀವ ಈಗ ಬಹುದೂರ ಹೋದಂತಿದೆ ಬಿಟ್ಟು ದೂರ ಆದರೂ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವೆ ಬಿಟ್ಟುಕೊಡಲಾಗದ ಸಾವಿರ ನೆನಪುಗಳ ಬಾರ ಮರೆಯದಿರಿ ನನ್ನ ತಪ್ಪಾದರೂ ಕ್ಷಮಿಸಿ ಮುನ್ನ ಇನ್ನೆಷ್ಟುದಿನ. ನಾನಿರೆನು ಇನ್ನು ಸೇರುವೆನು ಯಾವುದೋ ಒಂದು ಊರ ಎಲ್ಲಿದ್ದರೂ ಹೇಗಿದ್ದರೂ ನಿಮಗಾಗಿ ನಾನು ಪ್ರಾರ್ಥಿಸುವೆ ದೇವರ.
----------------------------------
ನೋಂದಣಿ ಐಡಿ : KPF-S1-5458