ಗುರುತುಗಳು
ರಚನೆ : ರವೀಂದ್ರ ಭಟ್, ಕುಳಿಬೀಡು
----------------------------------
ಗುರುತುಗಳನ್ನು ಮಾಡಿಕೊಳ್ಳಿ -ಗುರುಗಳ ಹುಕುಂ ಹೇಳಿದಂತೆ ಕೇಳಿ ಕೇಳಿ -ಅಭ್ಯಾಸವಾಗಿ ಹೊರಗಡೆ ಬಿಟ್ಟ ಚಪ್ಪಲಿಯಿಂದ ತೊಡಗಿ ಒಳಗಡೆ ಇಟ್ಟು ಮರೆಯುವ ಕೀಲಿ ಕೈ ವರೆಗೆ ಗುರುತಿಟ್ಟುಕೊಳ್ಳುವ ಕಷ್ಟಕ್ಕೆ ಒಗ್ಗಿದ್ದು. ನನ್ನನ್ನು ಗುರುತಿಟ್ಟುಕೊಳ್ಳಿ -ಎಂದದ್ದಕ್ಕೆಲ್ಲ ತಲೆಯಾಡಿಸುತ್ತ -ನೆನಪಿನ ಉಗ್ರಾಣದ ತುಂಬ ಬಗೆ ಬಗೆಯ ಗುರುತುಗಳು ! ಸುಮ್ಮನೆ ಇರಲಾರದ ಗುರುತುಗಳು ಅಲ್ಲಿ ಪರಸ್ಪರ ಢಿಕ್ಕಿ ಹೊಡೆದು ಕೊಳ್ಳುತ್ತ ಈಗ ಸ್ವ -ಸ್ವರೂಪಗಳೇ ನಾಪತ್ತೆ. ಗುರುತುಗಳೆಲ್ಲ ಕಲಸುಮೇಲೋಗರವಾಗಿ ಬೇಕಾದದ್ದಕ್ಕೆ ತಡಕಾಡಿದಂತೆ ಗಾಯಗಳಾಗಿ ನೋವಷ್ಟೇ ಉಳಿದು ಕಿಚಾಯಿಸುತ್ತಿವೆ -ಸದ್ಯಕ್ಕೆ.
----------------------------------
ನೋಂದಣಿ ಐಡಿ : KPF-S1-5473