ಪ್ರೀತಿಯ ಭಾವಸಾಗರ
ರಚನೆ : ಐಶ್ವರ್ಯ ಸೋಮಶಂಕರ ಲಾವಣಿ
----------------------------------
ತಿಳಿ ಸಂಜೆ ನೀಲಿ ಬಾನಲ್ಲಿ ಭುವಿಯ ಮುತ್ತಿಟ್ಟು ಬಂದಿಹ ಚಂದಿರ ತಡೆಯದಿರು ಇಂದು ಹರೆದು ಹಗುರಾಗಲಿ ಎನ್ನ ಮನದ ಭಾವಸಾಗರ ಪದ್ಮ ಪತ್ರದ ಮೇಲೆ ನಿನ್ನ ಹೆಸರ ಬರೆಯುವಾಸೆ ಮೌನ ಭಾಷೆಯಲ್ಲಿ ನಿನ್ನ ಕೂಗುವಾಸೆ ದಿನಗಳರಿವಿಲ್ಲದೆ ಬಿಗಿದಪ್ಪಿ ಮುದ್ದಿಸುವಾಸೆ ಪ್ರೇಮದ ಸಿಹಿ ಬಂಧನದೊಳ್ ಕುಣಿದು ನಲಿವಾಸೆ ಶಬರಿಯಾಗಿ ಧ್ಯಾನಿಸುತ್ತಿರುವೆ ನಿನ್ನ ನಾಮವ ವೈನಣಿಕನು ನೀನು ಮೀಟು ಬಾ ಭಾವ ತರಂಗವ ಮನದ ರಣರಂಗದಲಿ ಸಿಹಿ ಕಹಿಗಳ ಭಾವ ಸಂಘರ್ಷ ಸಾವಿರ ನೋವು ಬರಲಿ ಹಿಂದೊಮ್ಮೆ ತಿರುಗಿ ನೋಡು ನಿನ್ನ ನೆರಳಿಗೂ ಸ್ಪರ್ಧೆಯೊಡ್ಡಿ ಓದುತ್ತಿರುವೆ ನೀನಿರಬೇಕು ನಿನ್ನಿಂದಲೇ ಇರಬೇಕು.
----------------------------------
ನೋಂದಣಿ ಐಡಿ : KPF-S1-5479